Jump to content

User:MdAzhar143

From Wikipedia, the free encyclopedia

ಜೀವನ ಮತ್ತು ವಿದ್ಯಾಭ್ಯಾಸ

[edit]

ಮೊಹಮ್ಮದ್ ಅಜರುದ್ದೀನ್ ಅವರು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಇವರ ತಂದೆ ಅಬ್ದುಲ್ ಸತ್ತಾರ್, ತಾಯಿ ಸಮೀನಾ ಖಾನಂ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸದಡದಹಳ್ಳಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಕ್ಕಿಹೆಬ್ಬಾಳಿನಲ್ಲಿ ಪಡೆದಿದ್ದಾರೆ. ನಂತರ ಪ್ರೌಢಶಾಲಾ ಶಿಕ್ಷಣವನ್ನು ಕೃಷ್ಣರಾಜಪೇಟೆ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು [ಪ್ರೌಢಶಾಲಾ ವಿಭಾಗ] ಪಡದಿದ್ದಾರೆ. ನಂತರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೋಮೋ ವಿದ್ಯಾಭ್ಯಾಸವನ್ನು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಪಡೆದಿದ್ದಾರೆ. ಡಿಪ್ಲೋಮೋ ಮುಗಿದ ನಂತರ ಹಾಸನ ನಗರದಲ್ಲಿರುವ ಹೆಸರಾಂತ ಕಾಲೇಜು ಆಗಿರುವ ಮಲೆನಾಡು ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಇವರು ಖಾಸಗಿ ಸಂಸ್ಥೆಯಲ್ಲಿ ಡಿಸೈನ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕೃತಿಗಳು

[edit]

೧. ಅಕ್ಕಿ-ಚುಕ್ಕಿ (ಕವನ ಸಂಕಲನ)

೨. ನಿಸರ್ಗ ನಾದ (ಕವನ ಸಂಕಲನ)

೩. ಸಂಜೆ ವಿಹಾರ (ಲೇಖನ ಸಂಕಲನ)

೪. ಲೇಖನ ವಿಹಾರ (ಲೇಖನ ಸಂಕಲನ)

೫. ಹೇಮಾವತಿ ತೀರ (ಸಂಶೋಧನ ಸಂಕಲನ)

೬. ನನ್ನ ವಿಳಾಸ (ಕವನ ಸಂಕಲನ)

೭. ಅವಳ ಹೆಜ್ಜೆಯ ಗುರುತು (ಕಾದಂಬರಿ)

೮. ಎ.ಎನ್ ಮೂರ್ತಿರಾವ್ ಬದುಕು ಮತ್ತು ಬರಹ (ವ್ಯಕ್ತಿ-ಚಿತ್ರ)

೯. ಕಥೆಯಾದ ಪ್ರೇಯಸಿ (ಕಾದಂಬರಿ)

ಪ್ರಶಸ್ತಿಗಳು

[edit]

೧. ಕಾವ್ಯಶ್ರೀ ಪ್ರಶಸ್ತಿ

೨. ಬಸವಶ್ರೀ ಪ್ರಶಸ್ತಿ

೩. ಕನ್ನಡ ವಿಕಾಸ ರತ್ನ ಪ್ರಶಸ್ತಿ

೪. ತಿಮ್ಮೇಗೌಡ ಸಾಂಸ್ಕೃತಿಕ ಪ್ರಶಸ್ತಿ

೫. ಮಾಣಿಕ್ಯಶ್ರೀ ಪ್ರಶಸ್ತಿ

ಇತರೆ ಮಾಹಿತಿ

[edit]

ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು ಇವರು ಎಸ್.ಎಸ್.ಎಲ್.ಸಿ ಓದುತ್ತಿದ್ದ ಸಮಯದಿಂದ ಪತ್ರಿಕೆಗಳಿಗೆ ಅಂಕಣ ಪಡೆಯಲು ಪ್ರಾರಂಭ ಮಾಡಿದ್ದಾರೆ. ಇದುವರೆಗೆ ರಾಜ್ಯದ ನೂರಾರು ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿವೆ. ಸರಿಸುಮಾರು 500ಕ್ಕೂ ಹೆಚ್ಚಿನ ಅಂಕಣಗಳು ಇವರು ಬರೆದಿದ್ದಾರೆ. ಇವರ ಅಂಕಣಗಳು ಪ್ರಸ್ತುತ ಸಮಾಜದ ಬದಲಾವಣೆಯತ್ತ ಸಾಗಿಸುವ ರೀತಿಯಲ್ಲಿ ಇವರ ಅಂಕಣಗಳಿಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.