Jump to content

User:Lavanya S R

From Wikipedia, the free encyclopedia

ಸಾದಹಳ್ಳಿ ಬಂಡೆ


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಸಾದಹಳ್ಳಿ ಎಂಬ ಗ್ರಾಮ ಇದೆ. ಈ ಗ್ರಾಮವು ಬಂಡೆಗೆ ಪ್ರಸಿದ್ಧವಾಗಿದೆ. ಈ ಬಂಡೆಯು ಚೋಳ ರಾಜರ ಕಾಲದಿಂದಲೂ ಇದೆ. ಈ ಬಂಡೆಯು ಮೊದಲು ಜೋಡಿದಾರರ ಸ್ವತ್ತಾಗಿತ್ತು, ಕಾಲ ಕ್ರಮೇಣ ಈ ಬಂಡೆಗಳನ್ನು ಹಲವು ಜೋಡಿದಾರರು ಮಾರಾಟ ಮಾಡಿದರು. ಈ ಬಂಡೆಯ ಕೆಲಸದಿಂದ ಹಲವಾರು ಜನರ ಜೀವನ ನಡೆಯುತ್ತಿತ್ತು.

ಸ್ಥಳೀಯ ಮಹತ್ವ

[edit]

ಸಾದಹಳ್ಳಿಯ ಕಲ್ಲು ಎಂದರೆ  ಬಹಳ  ಪ್ರಸಿದ್ಧ ಹಾಗೂ ಅದಕ್ಕೆ ಒಳ್ಳೆಯ ಬೆಲೆಯು ಇತ್ತು. ಈ ಬಂಡೆಯನ್ನು ನಂಬಿಕೊಂಡು ಹಲವಾರು ಜನರು ಜೀವನ ಸಾಗಿಸುತ್ತಿದ್ದರು. ದಿನೇ ದಿನೇ ಬಂಡೆಯ ಕೆಲಸ ಜೋರಾಗಿ ನಡೆಯುತ್ತಿತ್ತು. ಸಿಡಿ ಮದ್ದುಗುಂಡುಗಳನ್ನು ಸಿಡಿಸಿ ಕಲ್ಲು ತೆಗೆಯುತ್ತಿದ್ದರು. ಕೆಲವೊಮ್ಮೆ ಸೌದೆ ಹಾಕಿ ಬೆಂಕಿ  ಹಚ್ಚಿ ಕಲ್ಲು ತೆಗೆಯುತ್ತಿದ್ದರು.

ಮುನೇಶ್ವರ ಸ್ವಾಮಿಯ ದೇವಸ್ಥಾನ

[edit]

ಈ ಬಂಡೆಯ ಮೇಲೆ ಮುನೇಶ್ವರ ಸ್ವಾಮಿಯ ದೇವಸ್ಥಾನ ಇತ್ತು. ಇಲ್ಲಿ ಈ ದೇವರು ಶಕ್ತಿಯುಳ್ಳದಾಗಿದೆ. ಬಂಡೆಯ ಕೆಲಸ ಪ್ರಾರಂಭಿಸುವ ಮುನ್ನ ಈ ದೇವರ ಆರಾಧನೆ ಮಾಡಿ ನಂತರ ಕೆಲಸ ಪ್ರಾರಂಭಿಸುತ್ತಿದ್ದರು.ಈ ದೇವಾಸ್ತಾನಕ್ಕೆ ಹೋಗಲು ಬಂಡೆಯನ್ನು ಕೊರೆದು ಕಬ್ಬಿಣದಿಂದ ಸೇತುವೆಯನ್ನು ಮಾಡಿದ್ದಾರೆ. ಈ ದಾರಿಯಲ್ಲಿ ಹೋಗಲು ತುಂಬಾ ಕುತೂಹಲವಾಗುತ್ತದೆ ಹಾಗೂ ಇಲ್ಲಿಂದ ಕೆಳಗೆ ನೋಡಿದರೆ ಖುಷಿ ಮತ್ತು ಆಶ್ಚರ್ಯವಾಗುತ್ತದೆ . ದೇವಸ್ತಾನವು ಭೂಮಿಯಿಂದ 400 ಅಡಿ ಎತ್ತರದಲ್ಲಿದೆ.

ಬಂಡೆಯನ್ನು ಕೊರೆದು ಕೊರೆದು ದೇವಸ್ಥಾನಕ್ಕೆ ತೊಂದರೆಯಾಗಬಹುದೆಂದು ಆ ದೇವರನ್ನು ಬಂಡೆಯ ಕೆಳಗೆ  ನೆಲದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಿ ನೂತನವಾಗಿ ದೇವರನ್ನು  ಪ್ರತಿಷ್ಠಾಪಿಸಿದ್ದಾರೆ.

ಇಂದಿನ ವಿಚಾರ

[edit]

ಕೆಲವು ಕಾರಣಗಳಿಂದ ಈ ಬಂಡೆಯುನ್ನು ನಿಲ್ಲಿಸಲಾಯಿತು. ಆದರೆ ಕೆಲವರು ಸರ್ಕಾರದಿಂದ ಒಮ್ಮತವನ್ನು ಪಡೆದು ಬಂಡೆ ಕೆಲಸ ನಿರ್ವಹಿಸುತ್ತಿದ್ದರು. ಆದರೂ ಈಗ ಸಂಪೂರ್ಣವಾಗಿ ಈ ಕೆಲಸವನ್ನು ರದ್ದು ಪಡಿಸಿದರು. ಆದರೂ ಈಗ ಸಾದಹಳ್ಳಿ ಬಂಡೆಯು ಅದರ ಮಹತ್ವವನ್ನು ,ಬೇಡಿಕೆಯನ್ನು , ಪ್ರಸಿದ್ದಿಯನ್ನು ಆಗೆ ಉಳಿಸಿಕೊಂಡಿದೆ.

ಆದರೆ ಈಗ ಈ ಜಾಗವು ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಕೆಲವರು ಟ್ರೆಕ್ಕಿಂಗ್ ಗೆ ಬರುತ್ತಾರೆ.ಇನ್ನು ಕೆಲವರು ಮುನೇಶ್ವರ ದೇವಸ್ಥಾನವನ್ನು ನೋಡಲು ಬರುತ್ತಾರೆ. ಕೆಲವು ಸಿನಿಮಾದವರು ಸರ್ಕಾರದ ಒಪ್ಪಿಗೆಯನ್ನು ಪಡೆದುಕೊಂಡು ಮುನ್ನೆಚ್ಚರಿಕೆಯನ್ನು ವಹಿಸಿ ಸಿನಿಮಾ ಚಿತ್ರೀಕರಣವನ್ನು ಚಿತ್ರಿಸಿದ್ದಾರೆ.

ವಿಶೇಷತೆಗಳು

[edit]

ಈ ದೇವಸ್ಥಾನವು ಒಂದು ಕ್ವೇರಿ ಪ್ರದೇಶದ ಹತ್ತಿರದಲ್ಲಿರುವುದರಿಂದ "ಸಾದಹಳ್ಳಿ ಕ್ವೇರಿ" ಎಂದು ಕರೆಯಲ್ಪಡುತ್ತದೆ. "ಕ್ವೇರಿ" ಎಂಬುದು ಶಿಲೆಯನು ಪಡೆಯುವ ಸ್ಥಳ ಎಂದು ಅರ್ಥ, ಆದ್ದರಿಂದ ಈ ಸ್ಥಳವು ಕಲ್ಲುಗಳ ಹೊರಹಾಕಲು ಉಪಯೋಗವಾಗುತ್ತಿತ್ತು.